Posts
Showing posts from July, 2017
🌟✨ ಸಣ್ಣ ಕಥೆ 🌟✨ ಅಮೆರಿಕದಲ್ಲಿ ಒಬ್ಬ ಯಶಸ್ವಿ ಬಿಜಿನೆಸ್‌ಮನ್ ಇದ್ದ. ಆತನಿಗೆ ಎಲ್ಲವೂ ಇತ್ತು. ಹಣ, ಕೀರ್ತಿ, ಐಷಾರಾಮಿ ಜೀವನ, ಆಳು-ಕಾಳು ಎಲ್ಲ ಇತ್ತು. ಆದರೂ ಏನೋ ಒಂದು ಕೊರತೆ, ಮನಸ್ಸಿನಲ್ಲಿ ಹತಾಶೆ, ಒಂಟಿತನ ತುಂಬಿಕೊಂಡಿತ್ತು. ಒಮ್ಮೆ ಆತ ಬಿಜಿನೆಸ್ ಟ್ರಿಪ್‌ಗೆಂದು ಯಾವುದೋ ನಗರಕ್ಕೆ ಹೋಗಬೇಕಾಗಿ ಬಂತು. ಅಲ್ಲಿ ಅವನು ಒಬ್ಬ ಕ್ಯಾಬ್ ಡ್ರೈವರ್‌ನನ್ನು ಭೇಟಿಯಾದ. ಆತನ ವ್ಯಕ್ತಿತ್ವವೇನೋ ವಿಶೇಷವಾಗಿದೆ ಅಂತ ಬಿಜಿನೆಸ್‌ಮನ್‌ಗೆ ಅನ್ನಿಸಿತು. ಡ್ರೈವರ್ ಭಾರೀ ಸಂತೋಷದಲ್ಲಿರುವಂತೆ ಕಾಣಿಸಿದ. ‘ಏನಪ್ಪಾ ತುಂಬಾ ಖುಷಿಯಾಗಿರುವಂತೆ ಕಾಣುತ್ತಿದೆ’ ಎಂದು ಅವನನ್ನು ಮಾತಿಗೆಳೆದ. ‘ಹಾಗೇನಿಲ್ಲ, ನಾನಿರುವುದೇ ಹೀಗೆ. ನಾನು ಸದಾ ಸುಖಿ’ ಅಂದ ಡ್ರೈವರ್. ‘ಹೌದಾ, ಅದ್ಹೇಗೆ ಡ್ರೈವರ್ ಆಗಿ ನೀನು ಖುಷಿಯಾಗಿರ್ತೀಯಾ?’ ಅಂತ ಆಶ್ಚರ್ಯದಿಂದ ಕೇಳಿದ ಬಿಜಿನೆಸ್‌ಮನ್. ‘ಹೇಗಂದ್ರೆ’, ನಾನು ಜೀವನ ಪಾಠಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ’ ಅಂದ. ಬಿಜಿನೆಸ್‌ಮನ್‌ಗೆ ಇನ್ನೂ ಆಶ್ಚರ್ಯ. ಇದ್ಯಾವುದಪ್ಪ ಹೊಸ ಪಾಠ, ನನಗೆ ಗೊತ್ತಿಲ್ಲದೇ ಇರೋದು ಅಂತ ಯೋಚಿಸಿ ತನಗೂ ತಿಳಿಸುವಂತೆ ಕೇಳಿಕೊಂಡ. ನಂತರ ಡ್ರೈವರ್ ಒಂದೊಂದೇ ಪಾಠ ಹೇಳುತ್ತಾ ಹೋದ. 💥– ಬೇರೆಯವರು ನಿಮ್ಮನ್ನು ಪ್ರೀತಿಸುವಂತೆ ಮಾಡಲು ಸಾಧ್ಯವಿಲ್ಲ. ಆದರೆ ಎಲ್ಲರೂ ಇಷ್ಟಪಡಬಹುದಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು. ಪ್ರೀತಿಸುವುದು, ದ್ವೇಷಿಸುವುದು ಪರರಿಗೆ ಬಿಟ್ಟಿದ್ದು. 💥– ನಂಬಿಕೆ, ವಿಶ್ವಾಸ ಬೆಳೆಸಿಕೊಳ್ಳಲು ವರ್ಷಗಳೇ ಬೇಕಾಗುತ್ತದೆ. ಆದರೆ ಕ್ಷಣಮಾತ್ರದಲ್ಲಿ ನಂಬಿಕೆಯನ್ನು ನುಚ್ಚುನೂರು ಮಾಡಿಬಿಡಬಹುದು. 💥– ನಿಮ್ಮ ಜೀವನದಲ್ಲಿ ಏನೇನಿದೆ, ಎಷ್ಟು ಆಸ್ತಿ-ಅಂತಸ್ತಿದೆ ಎಂಬುದು ಮುಖ್ಯವಲ್ಲ. ನಿಮ್ಮ ಜೀವನದಲ್ಲಿ ಯಾರ್ಯಾರಿದ್ದಾರೆ ಎನ್ನುವುದು ಮುಖ್ಯ. 💥– ಜೀವಮಾನದುದ್ದಕ್ಕೂ ನೋವು ಕೊಡುವಂಥ ಕೆಲಸವೊಂದನ್ನು ಒಂದು ಸೆಕೆಂಡ್‌ನಲ್ಲಿ ಮಾಡಿಬಿಡಬಹುದು. 💥– ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾದಾಗ ಕೊನೆಯಲ್ಲಿ ಒಳ್ಳೆಯ ಮಾತುಗಳನ್ನಾಡಿ. ಯಾರಿಗೆ ಗೊತ್ತು ನೀವು ಅದೇ ಕೊನೆಯ ಬಾರಿಗೆ ಅವರನ್ನು ಕಾಣಲು ಸಾಧ್ಯವಾಗುವುದೇನೋ. 💥– ನೀವು ನಿಮ್ಮ ವರ್ತನೆಯನ್ನು ಕಂಟ್ರೋಲ್ ಮಾಡಬೇಕು, ಇಲ್ಲದಿದ್ದರೆ ಅದು ನಿಮ್ಮನ್ನು ಕಂಟ್ರೋಲ್ ಮಾಡುತ್ತದೆ. 💥– ಜಗತ್ತಿನಲ್ಲಿ ಅತಿ ಕಷ್ಟದ ಕೆಲಸವೆಂದರೆ ಕ್ಷಮಿಸುವುದು. ಒಮ್ಮೆ ಅದನ್ನು ಮೈಗೂಡಿಸಿಕೊಂಡರೆ ನಿಮಗಿಂತ ಸುಖಿ ಬೇರೊಬ್ಬರಿಲ್ಲ. 💥– ಇನ್ನೊಬ್ಬನ ವ್ಯಕ್ತಿತ್ವವನ್ನು ಅಳೆಯಲು ಬಳಸಬಹುದಾದ ಅತ್ಯಂತ ಕೊಳಕು ಸಾಧನವೆಂದರೆ ಅದು ಹಣ. 💥– ಸಿಟ್ಟು ಮಾಡಿಕೊಳ್ಳುವ ಎಲ್ಲ ಅಧಿಕಾರವೂ ಮನುಷ್ಯನಿಗಿದೆ. ಆದರೆ ಸಿಟ್ಟಿನ ಭರದಲ್ಲಿ ಇನ್ನೊಬ್ಬರನ್ನು ಹಿಂಸಿಸುವುದು ತಪ್ಪು. 💥– ನೀವು ಎಷ್ಟು ವರ್ಷ ಬದುಕುತ್ತೀರಿ ಎಂಬುದು ಮುಖ್ಯವಲ್ಲ, ಹೇಗೆ ಬದುಕುತ್ತೀರಿ ಎಂಬುದು ಮುಖ್ಯ. 💥– ನಿಮ್ಮ ಗೆಳೆಯ ಎಷ್ಟೆ ಒಳ್ಳೆಯವನಾಗಿದ್ದರೂ, ಯಾವುದೋ ಕೆಟ್ಟಘಳಿಗೆಯಲ್ಲಿ ನಿಮಗೆ ನೋವುಂಟು ಮಾಡುತ್ತಾನೆ. ಅವನನ್ನು ಕ್ಷಮಿಸಿ ಗೆಳೆತನ ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. 💥– ಬೇರೆಯವರು ನಿಮ್ಮನ್ನು ಕ್ಷಮಿಸಿದರಷ್ಟೇ ಸಾಲದು, ನಿಮ್ಮನ್ನು ನೀವು ಕ್ಷಮಿಸುವುದನ್ನೂ ಕಲಿಯಬೇಕು. 💥– ನಿಮ್ಮ ಹೃದಯ ಎಷ್ಟೇ ಛಿದ್ರ ಛಿದ್ರವಾಗಿದ್ದರೂ ಈ ಜಗತ್ತು ನಿಮಗಾಗಿ ರೋದಿಸುವುದಿಲ್ಲ. – ಇಬ್ಬರು ವಾದ ಮಾಡುತ್ತಾರೆಂದರೆ ಅವರ ಮಧ್ಯೆ ಪ್ರೀತಿಯಿಲ್ಲವೆಂದಲ್ಲ. ಹಾಗೆಯೇ ಇಬ್ಬರು ವಾದ ಮಾಡದಿದ್ದರೆ ಅವರ ಮಧ್ಯೆ ಪ್ರೀತಿಯಿದೆಯೆಂದೂ ಅಲ್ಲ. 💥– ನಿಮಗೆ ಗೊತ್ತಿರದ ಯಾವುದೋ ಒಂದು ರಹಸ್ಯವನ್ನು ತಿಳಿದುಕೊಳ್ಳಲೇಬೇಕು ಎಂದು ಹಠಕ್ಕೆ ಬೀಳಬೇಡಿ. ಅದು ನಿಮ್ಮ ಜೀವನವನ್ನೇ ಬುಡಮೇಲು ಮಾಡಿಬಿಡಬಹುದು. 💥– ನಿಮ್ಮ ಮಕ್ಕಳನ್ನು ಎಷ್ಟೇ ಪ್ರೀತಿಯಿಂದ ಸಾಕಿದರೂ ಅವರು ನಿಮಗೆ ಒಂದಲ್ಲ ಒಂದು ಸಮಯದಲ್ಲಿ ನೋವು ಕೊಡುತ್ತಾರೆ. ಹಾಗೆಯೇ ನೀವು ಅವರಿಗೆ ನೋವು ಮಾಡುತ್ತೀರಿ. ಮಕ್ಕಳ-ಹೆತ್ತವರ ನಡುವೆ ಇದು ಸರ್ವೇ ಸಾಮಾನ್ಯ. – ಯಾವಾಗ ಬೇಕಾದರೂ, ಯಾರಿಂದ ಬೇಕಾದರೂ ನಿಮ್ಮ ಜೀವನ ಬದಲಾಗಬಹುದು. 💥– ಜೀವನ ಯಾರನ್ನು, ಯಾವಾಗ ಬೇಕಾದರೂ ನಿಮ್ಮಿಂದ ಕಿತ್ತುಕೊಳ್ಳಬಹುದು. So learn to live alone. 💥– ಬೇರೆಯವರ ಜೀವನವನ್ನು ಜಡ್ಜ್ ಮಾಡುವ ಅಧಿಕಾರ ನಮಗಿಲ್ಲ. ಎಲ್ಲರೂ ಅವರದ್ದೇ ಆದ ಯುದ್ಧವನ್ನು ಎದುರಿಸುತ್ತಿದ್ದಾರೆ. ಅವತ್ತು ಬಿಜಿನೆಸ್‌ಮನ್‌ಗೆ ಒಬ್ಬ ಡ್ರೈವರ್‌ನಿಂದ ಜ್ಞಾನೋದಯವಾಗಿತ್ತು ಸಂಗ್ರಹ :- 🍁 ಶುಭರಾತ್ರಿ ಸ್ನೇಹಿತರೇ ಸಿಹಿಕನಸಿನೊಂದಿಗೆ ...
- Get link
- X
- Other Apps
*ಪರಿಪೂರ್ಣತೆ* ಎಂದರೇನು..? 1.👉 *ಮತ್ತೊಬ್ಬರನ್ನು ಬದಲಾಯಿಸುವ ಪ್ರಯತ್ನ ಬಿಟ್ಟು*... *ನೀನು ಬದಲಾದಾಗ... ✌ *ಪರಿಪೂರ್ಣತೆಯ* ಸಂಕೇತ. 2.👉 *ಜನ ಹೇಗಿದ್ದಾರೋ...ಹಾಗೆಯೇ ಸ್ವೀಕರಿಸಿ*ದಾಗ.... ✌ *ಪರಿಪೂರ್ಣತೆ* 3.👉 *ಪ್ರತಿಯೊಬ್ಬರೂ...ಅವರ ದಾರಿಯಲ್ಲಿ ಅವರು ಸರಿಯಿದ್ದಾರೆ...ಎಂದು ತಿಳಿದಾಗ....ಅದು *ಪರಿಪೂರ್ಣತೆ* 4.👉 *ಎಲ್ಲರೊಂದಿಗೂ ಹೊಂದಾಣಿಕೆಯಿಂದ ನೀನೂ ಹೊರಟಾಗ....ಅದು *ಪರಿಪೂರ್ಣತೆ* 5.👉 *ಬೇರೆಯವರಿಂದ ನೀನು ಅಪೇಕ್ಷಿಸುವುದನ್ನು ಬಿಟ್ಟಾಗ..✌ *ಪರಿಪೂರ್ಣತೆ* 6.👉 *ನೀನು ಮಾಡುತ್ತಿರುವ ಕೆಲಸ ನಿನಗೆ ಆತ್ಮವಿಶ್ವಾಸ ಮತ್ತು ಶಾಂತಿ ಸಿಕ್ಕಾಗ....ಅದು ✌ *ಪರಿಪೂರ್ಣತೆ* 7.👉 *ನಿನ್ನ ಜಾಣ್ಮೆ ಹಾಗೂ ಶಕ್ತಿಯನ್ನು ಪ್ರದರ್ಶಿಸುವುದನ್ನು ನಿಲ್ಲಿಸಿದಾಗ....ಅದು *ಪರಿಪೂರ್ಣತೆ* 8.👉 *ಮತ್ತೊಬ್ಬರು ನಿನ್ನನ್ನು ತೆಗಳಿದಾಗ ಸ್ವೀಕರಿಸುವ ಗುಣವಿದ್ದಾಗ.....ಅದು *ಪರಿಪೂರ್ಣತೆ* 9.👉 *ನಿನ್ನನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದನ್ನು ಬಿಟ್ಟಾಗ.....ಅದು* ✌*ಪರಿಪೂರ್ಣತೆ* *"ಇನ್ನೊಂದು ಪ್ರಮುಖ ಅಂಶ"* *10.👉ಪ್ರತಿಯೊಂದು ವಿಚಾರ ಮತ್ತು ಕೆಲಸ ಗಳಲ್ಲಿ ಸುಖ-ಸಂತೋಷ ಅಪೇಕ್ಷಿಸುವುದನ್ನು ಬಿಟ್ಟಾಗ....ಅದು ✌ *ಪರಿಪೂರ್ಣತೆ*
- Get link
- X
- Other Apps